ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವಾರಾತ್ರಿ ಹಬ್ಬದ ನಿಮಿತ್ತ ಭಕ್ತಸಾಗರವೇ ಹರಿದುಬಂದಿದೆ. ರಾತ್ರಿಯಿಡೀ ಜಾಗರಣೆ ಮಾಡಿದ ಭಕ್ತರು ಬೆಳಗ್ಗೆಯಿಂದಲೇ ಮಾದಪ್ಪನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಉಘೇ ಉಘೇ ಘೋಷವಾಕ್ಯಗಳೊಂದಿಗೆ, ವಿದ್ಯುತ್ ದೀಪಾಲಂಕಾರಗಳ ನಡುವೆ ದೇವಾಲಯದಲ್ಲಿ ಭಕ್ತಿಪರವಶತೆಯ ವಾತಾವರಣ ನೆಲೆಸಿದೆ.