ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಬೇಸಿಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಜೀವನದಿ ಹೇಮಾವತಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದೆ. ಗೊರೂರು ಜಲಾಶಯಕ್ಕೆ ಜೀವಕಳೆ ಬಂದಿದ್ದು, ನೀರಿನ ಒಳ ಹರಿವಲ್ಲೂ ಭಾರಿ ಹೆಚ್ಚಿರೋದು ಕಂಡುಬಂದಿದೆ.