ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ನಂತರ ಕೋಲ್ಕತ್ತಾದ ಕಾಳಿಘಾಟ್ನಲ್ಲಿರುವ ಮಮತಾ ಬ್ಯಾನರ್ಜಿ ನಿವಾಸ ಬಿಕೋ ಎನ್ನುತ್ತಿದೆ. 15 ವರ್ಷಗಳ ಕಾಲ ಟಿಎಂಸಿ ಪಕ್ಷದ ಪ್ರಮುಖ ಶಕ್ತಿ ಕೇಂದ್ರವಾಗಿದ್ದ ಅವರ ಮನೆ ಈಗ ಕಾರ್ಯಕರ್ತರಿಲ್ಲದೆ ಖಾಲಿಯಾಗಿದೆ. ಭದ್ರತೆಯೂ ಕಡಿಮೆಯಾಗಿದೆ. ಇದು ಸೋಲಿನ ನಂತರದ ಬದಲಾದ ವಾತಾವರಣವನ್ನು ಬಿಂಬಿಸುತ್ತದೆ.