ಕಾರು ಜಜ್ಜಿ ಹಾಳಾಗಿದ್ದರಿಂದ ಅದನ್ನು ರಿಪೇರಿ ಮಾಡಲು ವ್ಯಕ್ತಿಯೊಬ್ಬ ಇಟ್ಟಿಗೆ, ಸಿಮೆಂಟ್ ಬಳಸಿರುವ ವಿಡಿಯೋ ವೈರಲ್ ಆಗಿದೆ. ಕಾರಿನ ಬಾಗಿಲಿನ ಬಳಿಯ ಡೆಂಟ್ ತುಂಬಲು ಸಾವಿರಾರು ರೂ. ಕೊಟ್ಟು ಶೋರೂಂಗೆ ಹೋಗುವ ಬದಲು ಆತ ಮಾಡಿರುವ ಈ ಕೆಲಸವನ್ನು ನೋಡಿ ಅಳಬೇಕೋ, ನಗಬೇಕೋ ತಿಳಿಯದಂತಾಗಿದೆ.