ಮಂಡ್ಯ ಮಳವಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಮದುವೆ ನಿಶ್ಚಯವಾಗಿದ್ದ ಪ್ರಿಯಾಂಕಾಳನ್ನು ಮದುವೆಯಾಗಲು ವಿವಾಹಿತ ಮುತ್ತುರಾಜು ಪೀಡಿಸುತ್ತಿದ್ದ. ಮದುವೆ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ, ಕಿರುಕುಳ ಹಾಗೂ ಸಾಮಾಜಿಕ ಭಯದಿಂದ ಪ್ರಿಯಾಂಕಾ ಮತ್ತು ತಾಯಿ ಶಕುಂತಲಾ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತ ಇಡೀ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.