ಮಂಡ್ಯ ತಾಲೂಕಿನ ಮಾಯಿಚನ್ನಹಳ್ಳಿಯಲ್ಲಿ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಅಣ್ಣ ಅಂಗರಾಜು, ತನ್ನ ಮಕ್ಕಳಾದ ಜಿರೇಶ್ ಮತ್ತು ದರ್ಶನ್ ಜೊತೆ ಸೇರಿ ತಮ್ಮ ಯೋಗೇಶ್ರನ್ನು (35) ಚಾಕುವಿನಿಂದ 28 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದು ಸಹೋದರರ ನಡುವಿನ ಆಸ್ತಿ ವಿವಾದದ ಘೋರ ಪರಿಣಾಮವಾಗಿದೆ.