ಮಂಡ್ಯದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಎಲ್ಪಿಜಿ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆ ಖಂಡಿಸಿ ವಿಶಿಷ್ಟ ಈಡುಗಾಯಿ ಚಳವಳಿ ನಡೆಯಿತು. ಖಾಲಿ ಸಿಲಿಂಡರ್ಗಳಿಟ್ಟು ಪ್ರತಿಭಟಿಸಿದ ಅವರು, ಅಮೆರಿಕ-ಇಸ್ರೇಲ್ನಿಂದ ಇರಾನ್ ಮೇಲಿನ ಯುದ್ಧದಿಂದ ಅಡುಗೆ ಅನಿಲ ಪೂರೈಕೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು. ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಯುದ್ಧ ನಿಲ್ಲಿಸಿ ಅನಿಲ ಪೂರೈಸುವಂತೆ ಒತ್ತಾಯಿಸಿದರು.