ಹೊಸ ವರ್ಷ 2026 ಸ್ವಾಗತಿಸಲು ದೇಶದಾದ್ಯಂತ ಮತ್ತು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಮಂಗಳೂರಿಗೆ ಆಗಮಿಸಿದ್ದಾರೆ. ಪಣಂಬೂರು ಸೇರಿದಂತೆ ಕಡಲತೀರಗಳು ಮತ್ತು ದೇವಾಲಯಗಳು ಜನಸಂದಣಿಯಿಂದ ತುಂಬಿ ತುಳುಕುತ್ತಿವೆ. ಬೀಚ್ ಹೌಸ್ಗಳು, ರೆಸಾರ್ಟ್ಗಳು, ಹೋಟೆಲ್ಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಪ್ರವಾಸಿಗರು ಬೆಳ್ಳಂಬೆಳಗ್ಗೆ ಬೀಚ್ಗಳಲ್ಲಿ ಮೋಜು ಮಾಡುತ್ತಿದ್ದು, ರಾತ್ರಿ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.