ಮಾವಿನಹಣ್ಣು ಮತ್ತು ಚನ್ನಾ (ಕಡಲೆಕಾಳು) ಬಳಸಿ ಮಾಡುವ ರುಚಿಕರವಾದ ಚಾಟ್, ಬೇಸಿಗೆಯಲ್ಲಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಇದನ್ನು ಹಸಿ ಮಾವಿನಕಾಯಿ ಅಥವಾ ಮಾಗಿದ ಮಾವಿನಹಣ್ಣಿನಲ್ಲೂ ಮಾಡಬಹುದು. ಆರೋಗ್ಯಕ್ಕೂ ಒಳ್ಳೆಯದು ಅದಲ್ಲದೆ ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ಕೂಡ ಇದನ್ನು ಸೇವನೆ ಮಾಡಬಹುದು. ಈಗ ಮಾವಿನಹಣ್ಣಿನ ಋತುವಾಗಿರುವುದರಿಂದ ಈ ಚಾಟ್ ಅನ್ನು ಒಮ್ಮೆ ಮಾಡಿ ಸವಿಯಬಹುದು. ಹುಳಿ ಬೇಕಿದ್ದರೆ ಹಸಿ ಮಾವಿನಕಾಯಿ ಬಳಸಿ, ಸಿಹಿ ಮಿಶ್ರಿತ ಚಾಟ್ ಬೇಕಿದ್ದರೆ ಮಾಗಿದ ಹಣ್ಣು ಬಳಸಬಹುದು. ಇದನ್ನು ಮಾಡುವ ರೆಸಿಪಿಯನ್ನು madrascaferecipes ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.