ಮಾವಿನ ಹಣ್ಣಿನ ಪುಡ್ಡಿಂಗ್ (Mango Pudding) ಬೇಸಿಗೆಯಲ್ಲಿ ಮಾಡಿ ಸವಿಯಬಹುದಾದ ವಿಶೇಷ ಸಿಹಿತಿಂಡಿಯಾಗಿದೆ. ಅಷ್ಟು ಮಾತ್ರವಲ್ಲ ಇದನ್ನು ಮಾಡುವುದು ಕೂಡ ಬಹಳ ಸುಲಭ ಕೇವಲ ಮೂರು ಪದಾರ್ಥಗಳು ಇದ್ದರೆ ಸಾಕು ಈ ರುಚಿಕರವಾದ ತಣ್ಣನೆಯ ಸಿಹಿತಿಂಡಿ ರೆಡಿಯಾಗುತ್ತದೆ. ಮುಂದಿನ ಸಲ ಏನಾದರೂ ಸಿಹಿ ತಿನ್ನಬೇಕು ಎಂದು ಅನಿಸಿದರೆ ಈ ರೆಸಿಪಿಯನ್ನು ತಪ್ಪದೆ ಮಾಡಿ ಸವಿಯಿರಿ. ಮನೆಯಲ್ಲೇ ಮಾಡಬಹುದು. ಯಾವುದೇ ಜೆಲಾಟಿನ್ ಇಲ್ಲದೆ, ಕೇವಲ ಕೆಲವೇ ನಿಮಿಷಗಳಲ್ಲಿ ಬಾಯಲ್ಲಿ ಕರಗುವ ಪುಡ್ಡಿಂಗ್ ತಯಾರಿಸುವುದನ್ನು gaurii_ ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.