ಮಾವಿನ ಸಾಗೋ ಅಥವಾ ಸಬ್ಬಕ್ಕಿ ಮಾವಿನ ಡೆಸರ್ಟ ಒಂದು ಅದ್ಭುತವಾದ ಆಹಾರ. ಬೇಸಿಗೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಮಾಡಿ ಸವಿಯಲೇಬೇಕು. ಕೇವಲ ಮಾವಿನಹಣ್ಣು, ಸಬ್ಬಕ್ಕಿ, ಮತ್ತು ಹಾಲು/ತೆಂಗಿನಕಾಯಿ ಹಾಲಿನಿಂದ ತಯಾರಿಸುವ ಜನಪ್ರಿಯ ಬೇಸಿಗೆಯ ಸಿಹಿತಿಂಡಿ. ಇದು ಕೆನೆಭರಿತ (creamy), ತಂಪಾದ ಮತ್ತು ಹಣ್ಣಿನ ಸುವಾಸನೆಯುಳ್ಳ ರುಚಿಕರವಾದ ಡೆಸರ್ಟ್ ಆಗಿದೆ. ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು ohyumness ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.