ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಸಿಗುವಷ್ಟು ದಿನ ಅದರಿಂದ ವಿವಿಧ ರೀತಿಯ ರೆಸಿಪಿ ಮಾಡಿ ಸವಿಯಬೇಕು ಎಂಬುದು ಹಲವರ ಆಸೆಯಾಗಿರುತ್ತದೆ. ಅಂತವರು ಮಾವಿನ ಹಣ್ಣಿನಿಂದ ಶೀರಾ (Mango Sheera) ಮಾಡಿ ತಿನ್ನಬಹುದು. ಮಾವಿನ ಹಣ್ಣು, ರವೆ, ತುಪ್ಪ ಮತ್ತು ಹಾಲು ಬಳಸಿ ಮಾಡುವ ಅತ್ಯಂತ ರುಚಿಕರವಾದ ಭಾರತೀಯ ಸಿಹಿ ತಿನಿಸಿದು. ಅದರಲ್ಲಿಯೂ ಇದು 30 ನಿಮಿಷಗಳಲ್ಲಿ ತಯಾರಾಗುವ ಕೇಸರಿಬಾತ್ ಆಗಿದೆ. ಹಾಗಿದ್ರೆ ಇನ್ನೇಕೆ ತಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ ಇದನ್ನು ಸುಲಭವಾಗಿ ಮಾಡುವುದನ್ನು bite_sight_by_nayana ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.