ಸಂಜೆ ಆಫೀಸ್ ನಿಂದ ಬಂದ ತಕ್ಷಣ ಚಟ್ ಪಟ್ ಅಂತಾ ತಿನ್ನಲು ಏನ್ ಆದ್ರೂ ಇದ್ರೆ ಅದಕ್ಕಿಂತ ಖುಷಿ ಬೇರೆ ಏನಿದೆ ಹೇಳಿ? ಆದರೆ ಪ್ರತಿದಿನವೂ ಒಂದೇ ರೀತಿ ತಿಂಡಿ ತಿನ್ನಲು ಯಾರಿಗೂ ಇಷ್ಟವಾಗುವುದಿಲ್ಲ. ಹಾಗಾಗಿ ಈ ಸಿಂಪಲ್ ಮಸಾಲಾ ಸೌತೆಕಾಯಿ ಚಾಟ್ ಮಾಡಿ ತಿನ್ನಬಹುದು. ಕೇವಲ 5 ನಿಮಿಷಗಳಲ್ಲಿ ಮಾಡಬಹುದಾದ ಈ ರೆಸಿಪಿ ತಿನ್ನುವುದಕ್ಕೆ ಮಾತ್ರವಲ್ಲ, ಮಾಡುವುದಕ್ಕೂ ತುಂಬಾ ಈಜಿಯಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಮಾಡಿ ನೋಡಿ.