ಸಂಜೆಯಾಗುತ್ತಿದ್ದಂತೆ ಏನಾದರೂ ಚಟಪಟ್ ಆಹಾರ ಸೇವನೆ ಮಾಡುವ ಮನಸ್ಸಾಗುತ್ತದೆ. ಇದು ಬಹಳ ಸಾಮಾನ್ಯ. ಆದರೆ ಪ್ರತಿನಿತ್ಯ ಏನು ಮಾಡಿ ತಿನ್ನುವುದು ಎಂಬುದು ತಿಳಿಯುವುದಿಲ್ಲ. ಆಗ ಈ ಒಂದು ರೆಸಿಪಿಯನ್ನು ಮಾಡಿ ಸವಿಯಬಹುದು. ಮಸಾಲಾ ಮ್ಯಾಗಿ ಚಾಟ್ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ರುಚಿ ನೀಡುತ್ತದೆ ಅಷ್ಟು ಮಾತ್ರವಲ್ಲ ಬಹಳ ಬೇಗ ಮಾಡಿ ತಿನ್ನಬಹುದು. ಇದನ್ನು ಮಾಡುವ ವಿಧಾನವನ್ನು spandanashreee ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.