ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮ ಹಾಗೂ ದಾವಣಗೆರೆ ನಗರದ ಪಿಬಿ ರಸ್ತೆಯ ಬಳಿಯ ಶನಿಶ್ವೇರ ದೇವಸ್ಥಾನದ ಬಳಿ ಎರಡು ಬೃಹತ್ ನಾಗರಹಾವುಗಳು ಕಾಣಿಸಿಕೊಂಡು ಜನರು ಆತಂಕಕ್ಕೀಡಾದರು. ಸ್ನೇಕ್ ಬಸಣ್ಣ ಸುಮಾರು ಎರಡು ಗಂಟೆಗಳ ಕಾಲ ಕಸರತ್ತು ಮಾಡಿ ಎರಡು ಹಾವುಗಳನ್ನು ಹಿಡಿದ ನಂತರ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸದ್ಯ ಹಾವುಗಳ ವಿಡಿಯೋ ವೈರಲ್ ಆಗಿದೆ.