ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಚಿತ್ರಾಲ್ ಜಿಲ್ಲೆಯಲ್ಲಿರುವ ಶೀಶಿ ಕೋಹ್ ಕಣಿವೆಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದ ಪರಿಣಾಮವಾಗಿ ಪ್ರವಾಹ ಹಾಗೂ ಭಾರೀ ಪ್ರಮಾಣದ ಮಣ್ಣಿನ ಕುಸಿತ ಉಂಟಾಗಿದೆ. ಈ ಪ್ರಕೃತಿ ವಿಕೋಪದಿಂದಾಗಿ ಪ್ರದೇಶದ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದ್ದು, ಹಲವು ಪ್ರಮುಖ ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಪ್ರವಾಹದ ರಭಸಕ್ಕೆ ಕಣಿವೆಯನ್ನು ಸಂಪರ್ಕಿಸುವ ಪ್ರಮುಖ ಸೇತುವೆಗಳು ಮತ್ತು ಸಂಪರ್ಕ ರಸ್ತೆಗಳು ಕೊಚ್ಚಿಹೋಗಿವೆ. ಇದರಿಂದಾಗಿ ಶೀಶಿ ಕೋಹ್ ಕಣಿವೆಯ ಹಲವು ಗ್ರಾಮಗಳು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿವೆ.