ಚೀನಾದಲ್ಲಿ ಹೊಸದಾಗಿ ನಿರ್ಮಿಸಲಾದ 2,500 ಅಡಿ ಎತ್ತರದ ಹಾಂಗ್ಕಿ ಸೇತುವೆಯು ನದಿಗೆ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಸಿಚುವಾನ್ ಪ್ರಾಂತ್ಯದಲ್ಲಿರುವ ಹಾಂಗ್ಕಿ ಸೇತುವೆಯನ್ನು ಈ ವರ್ಷದ ಆರಂಭದಲ್ಲಿ ಮಧ್ಯ ಚೀನಾವನ್ನು ಟಿಬೆಟ್ನೊಂದಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಯೋಜನೆಯ ಭಾಗವಾಗಿ ಪೂರ್ಣಗೊಳಿಸಲಾಗಿತ್ತು.