ಬೀದರ್ ಜಿಲ್ಲೆಯ ಮನ್ನಾಖೇಳಿಯ ಸೇಡಂಕರ್ ಆಸ್ಪತ್ರೆಯ ವೈದ್ಯರ ವಿರುದ್ಧ ರೋಗಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ಭುಜದ ಮೂಳೆ ಮುರಿದಿದ್ದ ಪ್ರಜ್ವಲ್ ಎಂಬ ಯುವಕನಿಗೆ ಶಸ್ತ್ರಚಿಕಿತ್ಸೆ (ಆಪರೇಷನ್) ನಡೆಸಿ ರಾಡ್ ಹಾಕುವುದಾಗಿ ವೈದ್ಯರು 37 ಸಾವಿರ ರೂ. ಹಣ ಪಡೆದಿದ್ದರು. ಆದರೆ, ಕೇವಲ ಬ್ಯಾಂಡೇಜ್ ಸುತ್ತಿ ಆಪರೇಷನ್ ಮುಗಿದಿದೆ ಎಂದು ಸುಳ್ಳು ಹೇಳಿ ಕಳುಹಿಸಿದ್ದರು. ನಂತರವೂ ಭುಜದ ನೋವು ಕಡಿಮೆಯಾಗದ ಕಾರಣ ಪ್ರಜ್ವಲ್ ಬೇರೆಡೆ ಸ್ಕ್ಯಾನಿಂಗ್ ಮಾಡಿಸಿದಾಗ, ಯಾವುದೇ ಆಪರೇಷನ್ ಆಗಿಲ್ಲ ಮತ್ತು ರಾಡ್ ಕೂಡ ಅಳವಡಿಸಿಲ್ಲ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆಯಂತೆ.