ಯುಗಾದಿ-ರಂಜಾನ್ ಹಬ್ಬದ ರಜೆಗಳ ಜೊತೆ ಭಾನುವಾರದ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗರು ಬೇರೆ ಬೇರೆ ಊರುಗಳತ್ತ ಮುಖ ಮಾಡಿದ್ದಾರೆ. ಕೆಲಸ ಕಾರ್ಯ ನಿಮಿತ್ತ ಬೆಂಗಳೂರಿನಲ್ಲಿ ತಂಗಿದ್ದವರು ಸಾಲು ಸಾಲು ರಜೆ ಇರುವುದರಿಂದ ತಮ್ಮ ತಮ್ಮ ಊರಿನತ್ತ ಹೋಗುತ್ತಿದ್ದಾರೆ. ಇದರಿಂದ ಮೆಜೆಸ್ಟಿಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜನ ಜಾತ್ರೆಯಾಗಿದೆ.