ಸಚಿವ ಡಿ. ಸುಧಾಕರ್ (65) ನಿಧನರಾಗಿದ್ದು, ಅವರ ಪುತ್ರ ಸುಹಾಸ್ ಅಂತಿಮ ವಿಧಿವಿಧಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ರಾತ್ರಿ ಚಳ್ಳಕೆರೆ ನಿವಾಸದಲ್ಲಿ, ನಾಳೆ ಬೆಳಗ್ಗೆ ಚಳ್ಳಕೆರೆ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದಾರೆ.