ತಮ್ಮ ಆಪ್ತರು ಟಾರ್ಗೆಟ್ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ ಎಂಬ ವಿಚಾರ ಸಂಬಂಧ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಮುಂಚೆ ಹೇಗಿದ್ದರೋ ಈಗಲೂ ಹಅಗೆಯೇ ಇದ್ದಾರೆ, ಟಗರು ಟಗರೇ ಎಂದಿದ್ದಾರೆ. ಅಲ್ಲದೆ ಈಗ ಸಿಎಂ ಸೈಲೆಂಟ್ ಇರಬಹುದು, ಆದರೆ ಮಾತಾಡಿದ್ರೆ ಬೇರೆಯದ್ದೇ ಸೌಂಡ್ ಬರಲಿದೆ. ಈಗ ಅವರು ಮಾತನಾಡುವ ಅಗತ್ಯ ಇಲ್ಲ, ಮುಂದೆ ಮಾತನಾಡುತ್ತರೆ ಎಂದು ತಿಳಿಸಿದ್ದಾರೆ.