ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಳೆಹೊಳೆ ಚೆಕ್ ಪೋಸ್ಟ್ ಬಳಿ ಬೈಕ್ ಸವಾರರಿಬ್ಬರು ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ಜಸ್ಟ್ ಮಿಸ್ ಆಗಿದ್ದಾರೆ. ರಸ್ತೆಯಲ್ಲಿದ್ದ ಆನೆ ಪಕ್ಕದಲ್ಲೇ ಲಾರಿ ಜೊತೆ ಸಾಗಲು ಯತ್ನಿಸಿದ ಸವಾರರನ್ನು ಆನೆ ಅಟ್ಟಾಡಿಸಿದೆ. ಪ್ರಾಣಭಯದಿಂದ ಸವಾರರು ಬೈಕ್ ಬಿಟ್ಟು ಕಾಡಿನೊಳಗೆ ಓಡಿ ಪಾರಾಗಿದ್ದು, ಮತ್ತೊಬ್ಬನನ್ನು ಆನೆ ಹೆದರಿಸಿ ಬಿಟ್ಟಿದೆ. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.