ಇಳಕಲ್ ನಗರದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅಧಿಕಾರಿಗಳ ಮೇಲೆ ಗರಂ ಆದ ಪ್ರಸಂಗ ನಡೆದಿದೆ. ಅಂಬೇಡ್ಕರ್ ವಸತಿ ಶಾಲೆ ಸ್ಥಳದ ವಿಚಾರವಾಗಿ ಸಿಟ್ಟಾದ ಶಾಸಕರು, ನಾನು ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಅಂಬೇಡ್ಕರ್ ವಸತಿ ಶಾಲೆ ಕಟ್ಟೋದಕ್ಕೆ ಅವಕಾಶ ಕೊಡೋದಿಲ್ಲ. ಮೂಲ ಸೌಕರ್ಯ ಸೌಲಭ್ಯವಿಲ್ಲ,ಪಕ್ಕದಲ್ಲಿ ಸ್ಮಶಾನ ಇದೆ.ಮಕ್ಕಳನ್ನು ತಂದು ಸುಡುಗಾಡಲ್ಲಿ ಹಾಕುವಂತ ಉದ್ದೇಶವನ್ನು ಹಿಂದಿನ ಶಾಸಕರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.