ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಬಿಗ್ಬಾಸ್ ವಿಚಾರವನ್ನು ವಿಧಾನಸಭೆಯಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಸ್ತಾಪಿಸಿದ್ದಾರೆ. ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದಿದ್ದು ಗಿಲ್ಲಿ ನಟ ಅಲ್ಲ, ಗೆದ್ದಿದ್ದು ನಿರ್ಮಲಾ ಸೀತಾರಾಮನ್ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ತೆರಿಗೆ ಬಗ್ಗೆ ಹೇಳುವಾಗ ಈ ವಿಚಾರ ಪ್ರಸ್ತಾಪಿಸಿದ್ದಾರೆ. 50 ಲಕ್ಷ ರೂಪಾಯಿ ಬಹುಮಾನದಲ್ಲಿ ಶೇಕಡ 18ರಷ್ಟು ಜಿಎಸ್ಟಿ, ಶೇಕಡ 30ರಷ್ಟು ಆದಾಯ ತೆರಿಗೆ ಮತ್ತು ಶೇಕಡ 4ರಷ್ಟು ಸೆಸ್ ಸೇರಿ ಒಟ್ಟು ಶೇಕಡ 52ರಷ್ಟು ಹಣ ನಿರ್ಮಲಾ ಸೀತಾರಾಮನ್ ಅವರಿಗೆ ತಲುಪುತ್ತದೆ. ಮಂಡ್ಯದ ಹುಡುಗನಿಗೆ ಕೇವಲ ಶೇಕಡ 48ರಷ್ಟು ಹಣ ಮಾತ್ರ ಸಿಗುತ್ತದೆ ಎಂದು ವಿವರಿಸಿದ್ದಾರೆ.