ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನಡೆದ ಕ್ರಿಕೆಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮ್ಮ ಪತ್ನಿ ವೀಣಾ ಕಾಶಪ್ಪನವರ ಜೊತೆ ನೃತ್ಯ ಮಾಡಿದ್ದಾರೆ. 'ನಾ ಡ್ರೈವರ್ ನಿ ನನ್ನ ಲವರ್' ಹಾಡಿಗೆ ಈ ದಂಪತಿಗಳು ಹೆಜ್ಜೆ ಹಾಕಿದ್ದು, ಜನರ ಗಮನ ಸೆಳೆದಿದೆ. ಈ ಸಾರ್ವಜನಿಕ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.