ರಾಂಚಿಯ ಮದ್ಯದಂಗಡಿಗೆ ನುಗ್ಗಿದ ಕೋತಿ ಅರ್ಧ ಬಾಟಲಿ ವೈನ್ ಕುಡಿದು, ಪ್ರಜ್ಞೆ ತಪ್ಪಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಿತ್ರ ಘಟನೆಯು ರಾಂಚಿಯ ಓರ್ಮಾಂಝಿಯ ಉಡ್ರಾ ಮಾಂಝಿ ಚೌಕ್ (ಬ್ಲಾಕ್ ಚೌಕ್) ಬಳಿ ಇರುವ ಮದ್ಯದಂಗಡಿಯಲ್ಲಿ ನಡೆದಿದೆ. ರಾತ್ರಿ ಸಮಯದಲ್ಲಿ ಅಂಗಡಿಯೊಳಗೆ ನುಗ್ಗಿದ ಕೋತಿಯು, ಎರಡು ಬಾಟಲಿ ಮದ್ಯ ಕುಡಿದು ಅಲ್ಲಿಯೇ ಮಲಗಿಕೊಂಡಿದೆ.