ಚನ್ನಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಹಲವರ ಮನಸ್ಸು ಕಲುಕಿದೆ. ಪ್ರತಿದಿನ ಆಹಾರ ನೀಡುತ್ತಿದ್ದ ಪಾರ್ವತಮ್ಮ ಎಂಬ ವೃದ್ಧೆ ಮೃತಪಟ್ಟಾಗ, ಆಕೆಯ ಶವ ತಬ್ಬಿ ಕೋತಿಯೊಂದು ರೋಧಿಸಿದೆ. ಮಾನವ-ಪ್ರಾಣಿ ಬಾಂಧವ್ಯದ ಅದ್ಭುತ ನಿದರ್ಶನವಿದು. ಮೃತದೇಹದ ಮೇಲೆ ಬಿದ್ದು ಕಣ್ಣೀರಿಡುತ್ತಿರುವ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಾಮನಗರ ಜಿಲ್ಲೆಯ ಈ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ.