ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಗವೊಂದು ಪ್ರವಾಸಿಗರ ಸ್ಮಾರ್ಟ್ಫೋನ್ ಕಸಿದ ಘಟನೆ ನಡೆದಿದೆ. ಯುವತಿಯ ಮೊಬೈಲ್ ಕಸಿದು ಮಂಗ ಸಮೀಪದ ಬಂಡೆ ಏರಿಸೆ. ಬಳಿಕ ಯುವಕರು ಮಂಗನ ಬಳಿ ಮೊಬೈಲ್ ಪಡೆಯಲು ಹರಸಾಹಸ ಪಟ್ಟರು. ಒಂದು ಗಂಟೆಯ ಬಳಿಕ ಕೊನೆಗೂ ಮೊಬೈಲ್ ಯುವತಿಗೆ ಸಿಕ್ಕಿತು. ಘಟನೆಯ ವಿಡಿಯೋ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.