ವಾಷಿಂಗ್ ಮಷಿನ್ ಒಳಗೆ ಬೆಕ್ಕು ಕುಳಿತಿದ್ದು ನೋಡದೆ ಮಹಿಳೆ ಸ್ವಿಚ್ ಆನ್ ಮಾಡಿರುವ ಘಟನೆ ಮಾಸ್ಕೋನಲ್ಲಿ ನಡೆದಿದೆ. ಅದು ಕೂಗಿದ ಬಳಿಕ ಎಚ್ಚರಗೊಂಡ ಮಹಿಳೆ ಕೂಡಲೇ ಸ್ವಿಚ್ ಆಫ್ ಮಾಡಿದ್ದಾರೆ. ಆದರೆ ಶಾರ್ಟ್ ಸರ್ಕ್ಯೂಟ್ ಆಗಿ ಬಾಗಿಲು ತೆರೆಯಲು ಆಗಲೇ ಇಲ್ಲ, ನೀರು ಕೂಡ ಒಳಗೇ ಇತ್ತು, ಬಳಿಕ ಕಂಪನಿಯವರನ್ನು ಕರೆಸಿ ಸರಿಪಡಿಸಲಾಯಿತು. ಅದೃಷ್ಟವಶಾತ್ ಬೆಕ್ಕಿಗೇನು ಆಗಿಲ್ಲ, ಆರೋಗ್ಯವಾಗಿದೆ.