ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಅನಾರೋಗ್ಯದಿಂದ ನಿಧನರಾದ 83 ವರ್ಷದ ಹುಚ್ಚಮ್ಮ ಶಟ್ಟರ್ ಅವರ ಸಾವಿನ ಸುದ್ದಿ ಕೇಳಿದ 52 ವರ್ಷದ ಪುತ್ರಿ ರಾಜಮ್ಮ ಆಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹೀಗೆ ತಾಯಿ-ಮಗಳು ಸಾವಿನಲ್ಲೂ ಒಂದಾದ ಅಪರೂಪದ ಪ್ರಸಂಗ ಇದಾಗಿದೆ.