ಹಾಸನದ ಮುಕಂದೂರು ಗ್ರಾಮದ ಹರ್ಷಿತಾ ಎಂಬಾಕೆ ಎಂಟು ವರ್ಷದ ದಾಂಪತ್ಯ ಹಾಗೂ ಏಳು ವರ್ಷದ ಮಗನನ್ನು ಬಿಟ್ಟು ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ಮದುವೆಯಾಗಿದ್ದಾರೆ. ಆಸ್ಪತ್ರೆಗೆ ಹೋಗುವ ನೆಪದಲ್ಲಿ ಸಾಂತ್ವನ ಕೇಂದ್ರದಿಂದ ಹೊರಬಂದ ಆಕೆ, ಪ್ರಿಯಕರನ ಜೊತೆ ಪರಾರಿಯಾಗಿ ಕಾರಿನಲ್ಲೇ ಮದುವೆಯಾಗಿರುವ ವಿಚಿತ್ರ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.