ಮೈಸೂರು ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಅಬ್ಬರಿಸಿದ್ದು, ಆಲಿಕಲ್ಲು ಸಹಿತ ಭಾರಿ ವರ್ಷಧಾರೆಯಾಗಿದೆ. ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಸುತ್ತಮುತ್ತ ಸುರಿದ ಮಳೆಯು ಗುಡುಗು ಸಿಡಿಲಿನಿಂದ ಕೂಡಿತ್ತು. ಈ ವೇಳೆ ಪಿರಿಯಾಪಟ್ಟಣದಲ್ಲಿ ಸಿಡಿಲು ಬಡಿದು ತೆಂಗಿನ ಮರ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಜಿಲ್ಲೆಯಾದ್ಯಂತ ಸುರಿದ ಮೊದಲ ಮಳೆಯು ರೈತರಲ್ಲಿ ಸಂತಸ ತಂದಿದೆ.