ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮುಂದುವರಿದಿದ್ದು, ಸರಗೂರು ತಾಲೂಕಿನ ಬೇಲದ ಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಬಳಿ ಕಾಡಾನೆಯ ದಾಂಧಲೆಗೆ 5 ಬೈಕ್ಗಳು ಜಖಂಗೊಂಡಿವೆ. ದೇವಾಲಯಕ್ಕೆ ಬಂದ ಭಕ್ತರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪೂಜೆಗೆ ತೆರಳಿದ್ದ ವೇಳೆ ಧಾವಿಸಿ ಬಂದ ಕಾಡಾನೆ, ಬೈಕ್ಗಳನ್ನು ಫುಟ್ಬಾಲ್ನಂತೆ ಒದ್ದು ಅಪ್ಪಚ್ಚಿ ಮಾಡಿದೆ. ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.