ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಹಿಳೆಯೊಬ್ಬರು ಅವರ ಕಾರಿಗೆ ಅಡ್ಡ ಬಂದ ಘಟನೆ ನಡೆದಿದೆ. ಚಿನ್ನ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆ ಸಿಎಂ ಬಳಿ ಮನವಿ ಮಾಡಲು ಬಂದಿದ್ದರು. ಭೇಟಿಗೆ ಅವಕಾಶ ಸಿಗದ ಕಾರಣ ಮಹಿಳೆ ಅನಿವಾರ್ಯವಾಗಿ ಸಿಎಂ ವಾಹನವನ್ನು ತಡೆದಿದ್ದಾರೆ.