ನಾಟಿ ಸ್ಟೈಲ್ ಮಶ್ರೂಮ್ ಬಿರಿಯಾನಿ (Nati Style Mushroom Biryani) ಒಂದು ಮಸಾಲೆಯುಕ್ತ, ಸುಲಭ ಮತ್ತು ರುಚಿಕರವಾದ ಅಡುಗೆ. ಪುದೀನಾ, ಕೊತ್ತಂಬರಿ, ಹಸಿರು ಮೆಣಸಿನಕಾಯಿ ಮತ್ತು ಹಸಿ ತೆಂಗಿನಕಾಯಿ ಬಳಸಿ ಅರೆದ ಮಸಾಲೆ ಹಾಗೂ ಅಣಬೆಯನ್ನು (Mushrooms) ಬಳಸಿ ಕುಕ್ಕರ್ನಲ್ಲಿ ೨೦-೨೫ ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಜೀರಾ ಸಾಂಬಾ ಅಕ್ಕಿ ಅಥವಾ ಬಾಸ್ಮತಿ ಅಕ್ಕಿಯನ್ನು ಬಳಸಿ ಇದನ್ನು ಮಾಡಲಾಗುತ್ತದೆ.