ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ಬರೆದಿದ್ದು, ಆಗಸ್ಟ್ 10ರಂದು ಒಂದೇ ದಿನ ಮೆಟ್ರೋದಲ್ಲಿ 11,19,815 ಲಕ್ಷ ಜನ ಸಂಚಾರ ಮಾಡಿದ್ದಾರೆ. 2025ರ ಆಗಸ್ಟ್ 14ರಂದು 10,82,394 ಲಕ್ಷ ಜನ ಪ್ರಯಾಣ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು. ಆಗಸ್ಟ್ 10ರಂದು ನೇರಳೆ ಮಾರ್ಗದಲ್ಲಿ 4,66,371, ಹಸಿರು ಮಾರ್ಗದಲ್ಲಿ 2,85,499, ಹಳದಿ ಮಾರ್ಗದಲ್ಲಿ 92,838 ಜನ ಪ್ರಯಾಣ ಮಾಡಿದ್ದಾರೆ.