ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಭಾರಿ ಗಾಳಿ ಮಳೆಗೆ ರಸ್ತೆಯಲ್ಲಿ ಬೃಹತ್ ಮರ ಬಿದ್ದಿದೆ. ರಸ್ತೆಯಲ್ಲಿ KSRTC ಬಸ್ ತೆರಳುತ್ತಿದ್ದಾಗಲೇ ಮರ ಧರೆಗುರುಳಿದೆ. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಕೆಎಸ್ಆರ್ಟಿಸಿ ಬಸ್ ಬಚಾವಾಗಿದೆ. ಮರ ಬೀಳುವ ದೃಶ್ಯ ಹಾಗೂ ಬಸ್ ಬಚಾವಾಗಿರುವ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.