ಮೈಸೂರಿನ ಪೈಲ್ವಾನ್ ಉಸ್ತಾದ್ ಅಮೃತ್ ಪುರೋಹಿತ್(65) ಗುರುವಾರ ಹೃದಯಾಘಾತದಿಂದ ನಿಧನರಾದರು. ಸುಣ್ಣದ ಕೇರಿ ಭೂತಪ್ಪ ಗರಡಿಯ ಉಸ್ತಾದ್ ಅಮೃತ್ ಪುರೋಹಿತ್ ಕುಸ್ತಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಉಸ್ತಾದ್ ಅನೇಕ ರಾಷ್ಟ್ರೀಯ, ರಾಜ್ಯಮಟ್ಟದ ಕುಸ್ತಿಪಟುಗಳನ್ನು ರೂಪಿಸಿದ್ದರು. ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.