ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ರಾಜಿನಾಮೆಗೆ ಒತ್ತಾಯಿಸಿ NSUI ನಿಂದ ಚಿಕ್ಕಮಗಳೂರಿನಲ್ಲಿ ಸೋಮವಾರ ‘ಐ ಆ್ಯಮ್ ಕಾಕ್ರೋಚ್’ ಅಭಿಯಾನ ಜಾಥಾ ನಡೆಯಿತು. ಕಾಕ್ರೋಚ್ ಮಾಸ್ಕ್, ಬ್ಯಾನರ್, ಟೀ ಶರ್ಟ್ ಬಳಸದಂತೆ ಸೂಚನೆ ನೀಡಿ ಪೊಲೀಸ್ ಇಲಾಖೆ ರ್ಯಾಲಿಗೆ ಅನುಮತಿ ನೀಡಿತ್ತು. ಆದಾಗ್ಯೂ ಕಾಕ್ರೋಚ್ ಟೀ ಶರ್ಟ್ ಬಳಸಿ ಹನುಮಂತಪ್ಪ ಸರ್ಕಲ್ನಿಂದ ಆಜಾದ್ ಪಾರ್ಕ್ವರೆಗೂ ಜಾಥಾ ನಡೆಯಿತು.