ನೇಪಾಳದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದ ಬಚಾವಾದ ಪುಟ್ಟ ಬಾಲಕ ತನ್ನ ತಂಗಿಯನ್ನು ಬೆನ್ನಿಗೆ ಕಟ್ಟಿಕೊಂಡು ಹೆತ್ತವರಿಗಾಗಿ ಹುಡುಕುತ್ತಿದ್ದಾನೆ. ಈ ವಿಡಿಯೋ ನೋಡಿದರೆ ಎಂಥವರ ಮನಸಾದರೂ ಕಲಕುವುದು ಗ್ಯಾರಂಟಿ. ತಮ್ಮ ತಂದೆ-ತಾಯಿಯನ್ನು ಹುಡುಕುತ್ತಿರುವ ಆ ಪುಟ್ಟ ಕಣ್ಣುಗಳಲ್ಲಿ ಭಯ, ನಿರೀಕ್ಷೆ ಮತ್ತು ಅಸಹಾಯಕತೆ ಎದ್ದು ಕಾಣುತ್ತಿದೆ.