ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿರುವ ವೋಟ್ ಚೋರಿ ಅಭಿಯಾನದಲ್ಲಿ ಭಾಗಿಯಾಗಲು ದೆಹಲಿಗೆ ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದಾರೆ. ಈ ವೇಳೆ ಅಲ್ಲಿಯೂ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಅಭಿಮಾನಿ ಘೋಷಣೆ ಕೂಗಿದ್ದಾರೆ. ಕರ್ನಾಟಕ ಭವನದಲ್ಲಿ ಈ ಪ್ರಸಂಗ ನಡೆದಿದ್ದು, ಬೆಂಬಲಿಗ ಮುಂದಿನ ಸಿಎಂಗೆ ಜೈ ಎಂದಿರುವ ವಿಡಿಯೋವೀಗ ವೈರಲ್ ಆಗಿದೆ.