ರಾಜ್ಯ ಕಾಂಗ್ರೆಸ್ನ ಕೊಟ್ಟ ಮಾತಿನ ವಿಚಾರ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದೆ. ಪುಣ್ಯಕೋಟಿ ಹಾಡು ನೆನಪಿಸಿ ಆರ್.ಅಶೋಕ್ ಕಾಂಗ್ರೆಸ್ ನಾಯಕರನ್ನು ಕುಟುಕಿದ್ದಾರೆ. ಇಲ್ಲಿ ಗೋವು ಯಾರು, ಹುಲಿ ಯಾರೆಂದು ಅಶೋಕ್ ಪ್ರಶ್ನಿಸಿದ್ದು, ಬೆಕ್ಕು ಸಿಂಹವಾಗುವ ಬೀಚಿಯವರ ಕಥೆ ಹೇಳಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿಪಕ್ಷ ನಾಯಕ ಟಾಂಗ್ ಕೊಟ್ಟಿದ್ದಾರೆ. ಹಿಂದೆ ಇದೇ ಡಿಕೆಶಿ ಒದ್ದು ಕಿತ್ತುಕೊಳ್ತೀನಿ ಎಂದು ಹೇಳಿದ್ರು ಎಂದು ಸದನದಲ್ಲಿ ನೆನಪಿಸಿದ್ದಾರೆ.