ದೇವನಹಳ್ಳಿಯಲ್ಲಿ ಖಾಸಗಿ ಸ್ಲೀಪರ್ ಬಸ್ಸೊಂದು ವೇಗವಾಗಿ ಬಂದು ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್ ಪ್ಲಾಜಾಗೆ ನುಗ್ಗಿದೆ. ನಂತರ ಸ್ವಲ್ಪ ದೂರ ಚಲಿಸಿ ಮತ್ತೆ ಹಿಂದೆ ಬಂದು ಪುನಃ ಟೋಲ್ ಪ್ಲಾಜಾಗೆ ಡಿಕ್ಕಿಯಾಗಿ ನಿಂತಿದೆ. ಅದೃಷ್ಟವಶಾತ್, ಸಾವುನೋವುಗಳು ಸಂಭವಿಸಿಲ್ಲ. ಘಟನೆಯ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.