ಉಕ್ರೇನ್ನ ರಾಜಧಾನಿ ಕೈವ್ ಸಮೀಪದ ಬುಚಾ ಜಿಲ್ಲೆಯ ಮೈಲಾ ಗ್ರಾಮದಲ್ಲಿರುವ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ರಷ್ಯಾ ಇಂದು ನಡೆಸಿದ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ 37 ಜನರು ಮೃತಪಟ್ಟಿದ್ದಾರೆ. ದಾಳಿಯ ರಭಸಕ್ಕೆ ಗೋದಾಮಿನಲ್ಲಿದ್ದ ಮದ್ದುಗುಂಡುಗಳು ಸರಣಿ ಸ್ಫೋಟಗೊಂಡು ಬೆಂಕಿ ಆವರಿಸಿದ್ದರಿಂದ, ಸುತ್ತಮುತ್ತಲಿನ 50ಕ್ಕೂ ಹೆಚ್ಚು ವಸತಿ ಕಟ್ಟಡಗಳು ಮತ್ತು ವೃದ್ಧಾಶ್ರಮವೊಂದು ತೀವ್ರವಾಗಿ ಹಾನಿಗೊಳಗಾಗಿವೆ.