ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮಾಟ ಮತ್ತು ಬಾನಾಮತಿ ಭೀತಿಯಿಂದ ಪೋಷಕರು ತಮ್ಮ ಮಗಳು ಸ್ನೇಹಾ ಸಿದ್ರಾಯ ಕಾಕಿಲೆಯನ್ನು ಕಳೆದ 10 ವರ್ಷಗಳಿಂದ ಗೃಹಬಂಧನದಲ್ಲಿರಿಸಿದ್ದಾರೆ. ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆಂದು ಕಾಲಿಗೆ ಸರಪಳಿ ಹಾಕಿ ಬಂಧಿಸಿರುವುದು ಬೆಳಕಿಗೆ ಬಂದಿದೆ.