ಭಾರತೀಯ ರೈಲ್ವೆಯಲ್ಲಿ ಧೂಮಪಾನ ಮಾಡುವುದು ನಿಷಿದ್ಧ, ಬೋಗಿಯ ಹೊರಗಲ್ಲ, ತನ್ನ ಸೀಟಿನಲ್ಲೇ ಕುಳಿತು ಸಿಗರೇಟ್ ಸೇದುತ್ತಿದ್ದ ವ್ಯಕ್ತಿಗೆ ಪ್ರಯಾಣಿಕರೊಬ್ಬರು ಧೂಮಪಾನ ಮಾಡದಂತೆ ಸಲಹೆ ನೀಡಿದ್ದಾರೆ. ಆದರೆ ಆತ ಕೇಳಲಿಲ್ಲ, ಅದಕ್ಕೆ ಪ್ರಯಾಣಿಕ ಆತನ ಬಾಯಿಯಲ್ಲಿದ್ದ ಸಿಗರೇಟ್ನ್ನು ಕಸಿದು ಕೆಳಗೆ ಎಸೆದಿದ್ದಾರೆ. ಅದಕ್ಕೆ ಕೋಪಗೊಂಡ ವ್ಯಕ್ತಿ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.