ಮೈಸೂರಿನಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಕೆಲ ವ್ಯಕ್ತಿಗಳು ಮದ್ಯಪಾನ ಮಾಡಿರುವ ವಿಡಿಯೋ ವೈರಲ್ ಆಗಿದೆ. ಹುಣಸೂರು ಡಿಪೋಗೆ ಸೇರಿದ KSRTC ಬಸ್ನಲ್ಲಿ ರಾತ್ರಿ 8:45ರ ವೇಳೆಗೆ ಘಟನೆ ನಡೆದಿದ್ದು, ಸೂಕ್ತ ಕ್ರಮಕ್ಕೆ ಬಸ್ನಲ್ಲಿದ್ದ ಪ್ರಯಾಣಿಕರು ಆಗ್ರಹಿಸಿದ್ದಾರೆ. ಬಸ್ನಲ್ಲಿ ಮದ್ಯ ಸೇವನೆ ಮಾಡಿದ್ದಕ್ಕೆ ಹಲವರು ಅಸಮಧಾನ ಹೊರಹಾಕಿದ್ದಾರೆ.