ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ನಲ್ಲಿ ನಡೆದ ಸಫಾರಿ ವೇಳೆ ನವಿಲಿನ ಅದ್ಭುತ ನೃತ್ಯವೊಂದು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದೆ. ಸಫಾರಿ ರಸ್ತೆಯಲ್ಲೇ ತನ್ನ ಸುಂದರ ಗರಿಗಳನ್ನು ಬಿಚ್ಚಿ, ನವಿಲು ಸಂಭ್ರಮದಿಂದ ನರ್ತಿಸಿದೆ. ಈ ಅಪರೂಪದ ಮತ್ತು ಮನಮೋಹಕ ದೃಶ್ಯಕ್ಕೆ ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ನವಿಲಿನ ನೃತ್ಯವನ್ನು ಸೆರೆಹಿಡಿದಿದ್ದು, ಸಫಾರಿ ವಾಹನ ಸಮೀಪಿಸಿದರೂ ನವಿಲು ಜಗ್ಗದೆ ತನ್ನ ನೃತ್ಯವನ್ನು ಮುಂದುವರೆಸಿದ್ದು ವಿಶೇಷವಾಗಿತ್ತು.