ಬೇಯಿಸಿದ ಕಡಲೆಕಾಯಿ ಸಲಾಡ್ (Peanut Salad) ಒಂದು ಆರೋಗ್ಯಕರ, ಪ್ರೋಟೀನ್ ಭರಿತ ಮತ್ತು ಸುಲಭವಾದ ಸ್ನ್ಯಾಕ್. ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇದು ಬೆಸ್ಟ್ ಆಹಾರ. ನೆನೆಸಿದ ಕಡಲೆಕಾಯಿಯನ್ನು ಬೇಯಿಸಿ, ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹಸಿರು ಮೆಣಸಿನಕಾಯಿ, ನಿಂಬೆ ರಸ ಮತ್ತು ಚಾಟ್ ಮಸಾಲದೊಂದಿಗೆ ಮಿಶ್ರಣ ಮಾಡಿ ಇದನ್ನು 5-10 ನಿಮಿಷಗಳಲ್ಲಿ ತಯಾರಿಸಬಹುದು. ಇದು ಸಂಜೆಯ ಲಘು ಆಹಾರಕ್ಕೆ ಅತ್ಯುತ್ತಮ ಆಯ್ಕೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ, ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು divyajayaram_ ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.