ಬೇಯಿಸಿದ ಕಡಲೆಕಾಯಿ, ಸೌತೆಕಾಯಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪಿದ್ದರೆ ಸಾಕು ಆರೋಗ್ಯಕರ ಸಲಾಡ್ ಅನ್ನು ರೆಡಿ ಮಾಡಬಹುದು. ಇದು ಮಾಡುವುದಕ್ಕೂ ಸುಲಭ. ಅಷ್ಟೇಅಲ್ಲ, ರುಚಿಯೂ ದುಪ್ಪಟ್ಟಾಗಿರುತ್ತದೆ. ಮಕ್ಕಳಿಗೆ ಏನಾದರೂ ಆರೋಗ್ಯಕರ ರೆಸಿಪಿ ಮಾಡಿಕೊಡಬೇಕು, ಅದು ನಿಮಿಷದಲ್ಲಿ ತಯಾರಾಗಬೇಕು ಅಂದಾಗ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಒಮ್ಮೆ ತಿಂದ ಮೇಲೆ ಮತ್ತೆ ಮತ್ತೆ ಮಾಡಿ ತಿನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ಇದನ್ನು ಸಿಂಪಲ್ ಆಗಿ ಮಾಡುವ ರೆಸಿಪಿ ವಿಡಿಯೋವನ್ನು passionatelywithlove ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.